ರಾಗ : ಮಿಯಾ ಮಲ್ಹಾರ್
ತಾಳ : ತೀನ್ ತಾಳ
ಕರಿಯ ಮೋಡಗಳ ಘರ್ಜನೆ
ವರ್ಷ ಋತುವಿನ ಸೂಚನೆ
ಗಿರಿಗೆ ಮೋಡಗಳ ಚುಂಬನ
ಮೇಘರಾಜನ ಆಲಿಂಗನ
ಹಸಿರನು ಹೊದ್ದಿದೆ ಪ್ರಕೃತಿಯ ತನುವು
ಮಳೆಯ ಧಾರೆಯ ಗಂಭೀರ ಗಾನವು
ತೋರುತಲಿಹುದು ಧರೆಯಲಿ ಸ್ವರ್ಗವು
ತಳಮಳಿಸುತಲಿದೆ ವಿರಹದಿ ಜೀವವು
ಪಶುಪಕ್ಷಿಗಳ ನೀರವ ಮೌನ
ಋಷಿಗಳು ಮಾಡಿಹೆ ಮೌನದಿ ಧ್ಯಾನ
ಮನವು ಬಯಸಿದೆ ಹರಿಹಂಸನ
ಕೃಷ್ಣನ ಕೊಳಲಿನ ಮಧುರ ಗಾನ
No comments:
Post a Comment