(Painting by:Mayura Simha https://www.instagram.com/mayurasimha/)
ನೋಡಿದೆನು ಇಂದು .. ನಾ
ತಪೋಕ್ಷೇತ್ರ ಶ್ರೀ ಕಾಶಿಪುರಕೆ ಬಂದು
ಸೋಪಾನಗಳ ಮೇಲೆ ಕುಳಿತಿಹರ ಇಂದು
ಜಪತಪವ ಗೈದಿಹ ಭಕ್ತ ಜನರು ನಿಂದು
ಪಾಪ ನಾಶಿನಿ ಗಂಗಾ ತಟದಲಿ ಮಿಂದು
ಜಪತಪವ ಗೈದಿಹ ಭಕ್ತ ಜನರು ನಿಂದು
ಪಾಪ ನಾಶಿನಿ ಗಂಗಾ ತಟದಲಿ ಮಿಂದು
ಹರನು ನಿಂತಿಹ ಆಗಸದಿ ಧರೆಗೆ ಇಳಿಸುತ
ಸುರನದಿ ಗಂಗೆಯ ತೀರದಿ ಇರುವ ಪುರವು
ವರವಾರಾಣಸಿ ಕ್ಷೇತ್ರದಿ ಮರಣಿಪ ಜನರಿಗೆ
ವರರಾಮನಾಮವ ಕಿವಿಯೊಳು ಉಲಿಯುತ
ಮೂಡಣನದಿ ರವಿಯುದಿಸುವ ಸಮಯದಿ
ಪಿಡಿದು ಡಮರು ಶೂಲಗಳ ಕರದಿ
ಕಂಡನು ಹರಿಹಂಸ ವಿಧುವ ಶಿಖೆಯೊಳು ಶಿವನ
ಮೂಡಿಹ ಶಿಖಿ ಕುಂಚದಿ ಚಿತ್ರದಲಿ
(ಶಿಖಿ = ಮಯೂರ)
No comments:
Post a Comment