ಕೇಳೇ ನನ್ನ ಜಾಣೆ
ನೀನೆ ನನ್ನ ವೀಣೆ
ನಾನುಡಿಸುವುದಿಲ್ಲ ಕೊಳಲು
ತೋಡಿಕೊಳ್ಳುವೆ ನನ್ನ ಅಳಲು
ನಾನೊಂದು ತೀರ ನೀನೊಂದು ತೀರ
ನಿನ್ನ (ದೂರ) ವಾಣಿಯೊಂದೇ ಹತ್ತಿರ
ಕಾದು ಕಾದು ಸೋತೆ, ನೀ ಬರೆಯಲಿಲ್ಲ ಈ-ಪತ್ರ
ನೀನು ನಾಚಿಕೊಳ್ಳಲು ಏನಿದೆಯೇ ನನ್ನ ಹತ್ರ
ನೀನು ಕೇಳಿದೆ, ನಿಮ್ಮ ಬತ್ತಳಿಕೆಯಲ್ಲಿ ಎಷ್ಟು ಕವನಗಳಿವೆಯೆಂದು
ಪಾಪ ! ನಿನಗೆ ಗೊತ್ತಿಲ್ಲ, ಬತ್ತಳಿಕೆ ಬರಿದಾಗಿದೆಯೆಂದು
ಇಂಥ ಸಂದರ್ಭಗಳು ಬೇಕು, ಕವಿತೆಗಳು ಮೂಡಲು
ಕಾತುರದಿ ಕಾದಿಹೆನು ಪ್ರೇಮಬಾಣವಾ ಹೂಡಲು
ಇಂದಿಗೆ ಇಷ್ಟು ಸಾಕು, ಮಲಗಲು ಹೊರಟಿಹೆನು
ಮತ್ತೆ ದೂರವಾಣಿಯಲ್ಲಿ ನಿನ್ನೊಡನೆ ಹರಟುವೇನು
(ಸ್ಯಾನ್ಹೋಸೆ ಇಂದ ಬರೆದದ್ದು)
No comments:
Post a Comment