Saturday, September 8, 2001

ಕ್ಯಾಲಿಫೋನಿಯಾದಲ್ಲಿ ನನ್ನ ಸ್ಥಿತಿ

 

ಅಲ್ಲಿ ಇಲ್ಲಿ ನೆಗೆಯುತಿದೆ ಮನವೆಂಬ ಮಂಗ
ಆದರೂ ಬಯಸುತಿದೆ ಸಜ್ಜನರ ಸಂಗ
ಇಲ್ಲಿ ಕಣ್ಗಳು ತರುತಲಿವೆ ಅದಕೆ ಭಂಗ
ಅದ ನಿನ್ನಲಿ ನಿಲ್ಲಿಸೋ ಹೇ ಶ್ರೀರಂಗ

ಈ ನನ್ನ ಮನಸ್ಸು ಚಂಚಲ
ಇದರಲಿ ತುಂಬಿದೆ ಹಾಲಾಹಲ
ಇದರಿಂದ ಹೊರಬರಲು ಒದ್ದಾಡುತ್ತಿದೆ ವಿಲವಿಲ
ಹೇ ಪ್ರಭು! ಕಾಪಾಡೋ ಕರುಣಾಲವಾಲ

No comments:

Post a Comment