Tuesday, December 15, 1998

15 ಡಿಸೆಂಬರ್ 1998

ಓ ನನ್ನ ವೀಣಾ,

ಮರೆತೆಯಾ? ಇಂದು ನಿನ್ನ ಹುಟ್ಟಿದ ಹಬ್ಬ
ಅಂತೂ ಒಮ್ಮೆಯಾದರೂ ಜ್ಞಾಪಿಸಿಕೊಂಡೆನಲ್ಲ! ಅಬ್ಬ!
ಇಂದಿಗೆ ತುಂಬಿದವು ನಿನಗೆ ಕಾಲು ಶತಮಾನ
ಇನ್ನೊಂದು ವರುಷ ಹೆಚ್ಚಿರಬಹುದೇ? ಎಂಬ ಅನುಮಾನ!

ನಿಧಾನವಾಗಿಯಾದರೂ ಕೊನೆಗೊಮ್ಮೆ ನೆನಪಿಗೆ ಬಂತಲ್ಲ, ಸಧ್ಯ!
ನಿನ್ನ ಪ್ರವೇಶ ನನ್ನ ಬಾಳಿನಲ್ಲಾದಮೇಲೆ ಬದಲಾಗದಿರಲು ಹೇಗೆ ಸಾಧ್ಯ?
ನನ್ನ ನೆನಪಿನ ಶಕ್ತಿ ನಿನಗೆ ಗೊತ್ತಿಲ್ಲವೇ?
Better late than never ಎಂದು ಕೇಳಿಲ್ಲವೇ?

ಇಗೋ! ಕೇಳು, ಈ ಸಂಧರ್ಭದಲ್ಲಿ ನನ್ನ ಹಾರೈಕೆಗಳು
ಜೀವನ್ದಲ್ಲಿ ತುಂಬಿ ಬರಲಿ ಮಧುರ ಸಂತಸದ ಕ್ಷಣಗಳು
ನಿನಗೆ ಆ ದೇವನ ಅನಂತ ಆಶೀರ್ವಾದಗಳು
ಪ್ರಿಯೆ!, ನಿನಗೆ ನನ್ನ ಹಾರ್ದಿಕ ಶುಭಾಷಯಗಳು!!

No comments:

Post a Comment