Monday, September 20, 2010

ಮೌನ ಚಿನ್ನ

ಮಹಿಳೆಯರಿಗೆ ಚಿನ್ನವೆಂದರೆ ಪಂಚ ಪ್ರಾಣ

ಅದಕೆ ಇರಬೇಕು ನನ್ನ ಮಡದಿಯ ಮೌನ

ಏಕೆಂದರೆ ಮಾತು ಬೆಳ್ಳಿ ಮೌನ ಚಿನ್ನ


ಚಿನ್ನದ ಸೂಜಿಯೋಂದು ಚುಚ್ಚುತಿದೆ ನನ್ನ

ಅದೇ ನನ್ನ ಮಡದಿಯ ಪಿನ್-ಡ್ರಾಪ್ ಮೌನ

ಕೇಳಿಲ್ಲವೇ, ಮಾತು ಬೆಳ್ಳಿ ಮೌನ ಚಿನ್ನ


ನನ್ನ ನಲ್ಲೆ ಮೌನದಾ ಮುನಿಸು

ಆಗಿದೆ ಮನಸಿಗೆ ತಿನಲಾಗದಾ ತಿನಿಸು

ಅರ್ಥವಾಗದು ಅವಳ ಮನಸು


ಮೌನೇನ ಕಲಹಂ ನಾಸ್ತಿ

ಆದರೆ ಮಾಡಿದೆ ಮಡದಿಯ ಮೌನ

ನನ್ನ ಮನಸಿನಾ ಕಳವಳ ಜಾಸ್ತಿ

ಮಾಡಿದೆ ನನ್ನ ತಪ್ಪಿಗೆ ತಕ್ಕ ಶಾಸ್ತಿ


ಗಂಡ ಹೆಂಡಿರು ಜೀವನಕ್ಕೆ

ಒಂದೇ ನಾಣ್ಯದ ಎರಡು ಮುಖಗಳು

ಅದಕ್ಕೆ ಇರಬೇಕು ನಮ್ಮಿಬ್ಬರ ಮುಖಗಳು

ಹಾಸಿಗೆಯಲಿ ವಿರುದ್ಧ ದಿಕ್ಕುಗಳು


ಈ ನನ್ನ ನಾಲ್ಕು ಸಾಲುಗಳು ಮೂಡಿಸಿದರೆ

ಮಡದಿಯ ಗಂಭೀರ ವದನದಲಿ ಮುಗುಳ್ನಗೆ

ಆಗುವುದು ನನ್ನ ಪ್ರಯತ್ನ ಸಾರ್ಥಕ

ಬೇರೇನೂ ಬೇಕಿಲ್ಲ ಎನಗೆ

1 comment:

  1. ///ಚಿನ್ನದ ಸೂಜಿಯೋಂದು ಚುಚ್ಚುತಿದೆ ನನ್ನ

    ಅದೇ ನನ್ನ ಮಡದಿಯ ಪಿನ್-ಡ್ರಾಪ್ ಮೌನ ///

    :))))))

    ReplyDelete