| ಲಾಲಿ ಶ್ರೀಹರಿಗೆ ಲಾಲಿ ಮಾಧವಗೆ ಲಾಲಿ ಪಾಲ್ಗಡಲ ಶಯನಗೆ | ಲಾಲಿ ಹತ್ತವತಾರವನು ಮಾಡಿದವಗೆ ಲಾಲಿ ವೈಕುಂಠ ವಾಸನಿಗೆ || ಲಾಲೀ...ಲಾಲೀ.. | |
| ಲಾಲಿ ಮೀನಾವತಾರವನು ತಳೆದವಗೆ ಲಾಲಿ ವೇದಗಳ ರಕ್ಷಕಗೆ | ಲಾಲಿ ಬೆಟ್ಟವನು ಬೆನ್ನಲ್ಲಿ ಪೊತ್ತವಗೆ ಲಾಲಿ ಕೂರ್ಮಾವತಾರಿಗೆ|| ಲಾಲೀ...ಲಾಲೀ.. | |
| ಲಾಲಿ ವಸುಧೆಯನು ಕೋರೆಯಿಂ ಪೊರೆದವಗೆ ಲಾಲಿ ಸೂಕರರೂಪಿಗೆ | ಲಾಲಿ ಕಶಿಪು ಸಂಹಾರಿಗೆ ಪ್ರಹ್ಲಾದ ವರದಗೆ ಲಾಲಿ ಶ್ರೀ ಲಕ್ಷ್ಮೀನರಸಿಂಹಗೆ|| ಲಾಲೀ...ಲಾಲೀ.. | |
| ಲಾಲಿ ಬಲಿಯನ್ನು ತುಳಿದು ಜಗವನ್ನೇ ಅಳೆದವಗೆ ಲಾಲಿ ವಾಮನರೂಪಿಗೆ | ಲಾಲಿ ಜಗತಿರುಗಿ ಖಳನೃಪರ ತರಿದವೆಗೆ ಲಾಲಿ ಶ್ರೀ ಪರಶುರಾಮನಿಗೆ|| ಲಾಲೀ...ಲಾಲೀ.. | |
| ಪಾಲಿಸಿ ಪಿತೃವಾಕ್ಯವನು ಧರುಮದಿ ನಡೆದವಗೆ ಲಾಲಿ ರಾಜೀವಲೋಚನಗೆ | ಲಾಲಿ ಗೋಪಿ ಚಿತ್ತಾಪಹಾರಿಗೆ ಲಾಲಿ ನವನೀತ ಚೋರನಿಗೆೆ|| ಲಾಲೀ...ಲಾಲೀ.. | |
| ಕಲಿಯುಗದಿ ಅಸುರರ ಬಲಹೀನ ಗೊಳಿಸಿದವಗೆ ಲಾಲಿ ಅವತಾರ ಬುದ್ಧನಿಗೆ | ಕಲಿಯುಗದ ಅಂತ್ಯದಿ ಧರುಮವನು ಉದ್ಧರಿಸೆ ಬರುವ ಕಲ್ಕಿ ಅವತಾರಿಗೆ|| ಲಾಲೀ...ಲಾಲೀ.. | |
| ಲಾಲಿ ಶಂಖ ಚಕ್ರವ ಪಿಡಿದು ನಿಂತವಗೆ ಲಾಲಿ ಶ್ರೀ ಕೌಶಿಕೇಶ್ವರಗೆ | ಲಾಲಿ ಹರಿಹಂಸನ ಕುಲದೈವಗೆ ಲಾಲಿ ಶ್ರೀ ಲಕ್ಷ್ಮೀಕೇಶವಗೆ|| ಲಾಲೀ...ಲಾಲೀ.. |
Sunday, December 29, 2024
ದಶಾವತಾರ ಲಾಲಿ ಹಾಡು
Subscribe to:
Post Comments (Atom)



No comments:
Post a Comment