Monday, July 22, 2013

ಗುರಗಳಿಗೆ ನಮನ🙏

ತಾಯಿ ದೇವರು ತಂದೆ ಗುರುವು
ಎಂದು  ಸಾರುತಲಿಹವು ಶ್ರುತಿಗಳು
ನಿಮ್ಮ ದಯೆಯಿಂ ಧರೆಗಿಳಿದು ಬಂದು
ಸಾರ್ಥಕ ಎನ್ನೀ ಜನುಮವು

ತಾಯ ಕರ್ತವ್ಯವ ಬಿಡದೆ ಪಾಲಿಸಿ
ಬೆಳೆಸಿದೆ ಮಮತೆ ವಾತ್ಸಲ್ಯಗಳಿಂದಲಿ
ಕರುಣೆ ಕ್ಷಮೆಗಳಾ ಪಾಠ ಕಲಿಸಿದೆ
ಸಹಿಸಿ ತಾಳುಮೆಯಿಂದಲಿ

ಬ್ರಹ್ಮ ವಿದ್ಯೆಯಾ ದೀರ್ಘ ಪಥದಿ
ಕೈ ಹಿಡಿದು ಮೊದಲ ಹೆಜ್ಜೆಯಾ ಇರಿಸಿದೆ
ಮಂತ್ರವ ಎನಗುಪದೇಶಿಸಿ, ಜನಕನೇ
ಮೋಕ್ಷ ಮಾರ್ಗವಾ ತೊರಿದೆ

ಆಧ್ಯಾತ್ಮ ಪಥದೊಳು ಸ್ವಾನುಷ್ಠಾನದಿಂದಲಿ
ಸ್ವಾನುಭವಿಯಾಗಿ ಉದಾಹರಣೆಯಾದೆಯು
ನಮ್ಮ ಬಾಳಿಗೆ ಜ್ಞಾನ ದೀವಿಗೆಯಾಗಿ
ಆದೆ ನೀ ಎನ್ನ ಮೊದಲ ಗುರುವು

ಗುರುಪೂರ್ಣಿಮೆಯ ದಿನವು ಇಂದು
ತುಂಬಿಹುದೆನ್ನಲ್ಲಿ ಧನ್ಯತಾ ಭಾವವು
ಕೃತಜ್ಞತೆಯಲಿ ತಲೆಯ ಬಾಗುತ
ನಿಮಗೀರ್ವರಿಗೂ ನಮ್ಮ ಸಾಷ್ಟಾಂಗ ನಮನವು!!

No comments:

Post a Comment