Tuesday, October 5, 2004

Metal & Meditation

Metal and Mind have similarity of some kind 
Annealing is to metal what meditation is to mind 
Metal cooling slowly is annealing 
Mind in meditation is mental healing

-- 05-0ct-2004

Thursday, April 22, 2004

ಸಂಕಲ್ಪ

ಜೀವನದಿ ಎಲ್ಲಕ್ಕೂ ಬೇಕು ಸಂಕಲ್ಪ
ಸಂಕಲ್ಪವಿಲ್ಲದೆ ಸಾಧಿಸುವುದು ಅತ್ಯಲ್ಪ
ಸಂಕಲ್ಪದಿಂದಲೇ ಸೃಷ್ಟಿಯಾಗುವುದು ಭಕ್ತಿ
ಅನವರತ ಭಕ್ತಿಯೊಂದೇ ಮೋಕ್ಷಕ್ಕೆ ಯುಕ್ತಿ

Friday, April 2, 2004

ಕಿಲಾಡಿ ಕಿಟ್ಟ

ಗೀತೆಯಾ ಬೋಧಿಸಿದ ಕಿಲಾಡಿ ಕಿಟ್ಟ
ಜಗದೊಳೆಲ್ಲವೂ ಅವನದೇ ಚಿತ್ತ
ಕರ್ಮ ಮಾಡುವ ಅಧಿಕಾರವ ನಮಗಿತ್ತ
ಜಾಣ, ಫಲ ಕೊಡುವ ಅಧಿಕಾರ ತಾನಿಟ್ಟುಕೊಂಡು ಬಿಟ್ಟ

Wednesday, February 25, 2004

ಜೀವಜಡ ಚೈತನ್ಯ




ಓ! ಜೀವಜಡ ಚೈತನ್ಯ
ನೀನೊಲಿದರೇ ಜೀವಿಗಳ ಜನ್ಯ
ನೀನೊಲಿದರೇ ನಾವ್ ಉಣಲು ಧಾನ್ಯ
ನೀನಿಲ್ಲದಿರೆ ಎಲ್ಲವೂ ಶೂನ್ಯ

ತೊಲಗಿಸು ಎನ್ನಲ್ಲಿನ ಔದಾಸೀನ್ಯ
ಹರಿಯಲಿ ಎನ್ನಲ್ಲಿ ನಿನ್ನ ಚೈತನ್ಯ
ಆಗಲಿ ನಿನ್ನಾರಾಧನೆಯೇ ಪ್ರಾಧಾನ್ಯ
ತನುಮನದಲಿ ತುಂಬಲಿ ದೈನ್ಯ

ನಿನ್ನ ನಾಮದಾ ಮಹಿಮೆ ಅಸಮಾನ್ಯ
ನಿನ್ನ ನಾಮಸ್ಮರಣೆ ಎನಗೆ ಬಲು ಮಾನ್ಯ
ಆಗದಿರು ನೀನೆನಗೆ ಅನ್ಯ
ನೀ ಎನಗೊಲಿದರೆ ನಾ ಧನ್ಯ...