ಇಂದು ಸಂಕ್ರಮಣಗಳೆರಡು ಆಗುತಲಿಹುವು
ಒಂದು ಗುರುದತ್ತರಿಗೆ ವೃತಿಯಿಂದ ನಿವೃತ್ತಿಗೆ
ಮತ್ತೊಂದು ದೇಶದ ಅರ್ಥವ್ಯವಸ್ಥೆ ಜಿ.ಎಸ್.ಟಿ ಕಡೆಗೆ
ಗುರುಗಳಿಗೂ ಜಿ.ಎಸ್.ಟಿ ಅನ್ವಯವಾಗುವುದೇನು?
"ಗುರು ಸಂಸಾರ ಟ್ರಾನ್ಸಫ಼ಾರ್ಮೇಶನ್"? ಎಂದು ಹೇಳಬಹುದೇನು?
ಗುರುದತ್ತನ ಕೃಪೆಯಿಂದ ನಿಮ್ಮ ಜನುಮವಾಯಿತಲ್ಲ!
ಅನೇಕ ಆದರ್ಶಗಳ ತಳೆದು ಗುರುವೇ ಆದಿರಲ್ಲ!
ಆದರೂ ಗುರುವೆಂಬ ಗರುವ ನಿಮಗಿಲ್ಲ
ನಿಮ್ಮ ಒಡನಾಟದಿ ಜನರು ಧನ್ಯರಾದರಲ್ಲ
ಮಹಾಪುರುಷನ ಜನ್ಮದಿನವೇ ನಿಮ್ಮ ಜನುಮ ದಿನ
ಮಹಾತ್ಮನ ಆದರ್ಶಗಳು ತುಂಬಿವೆ ನಿಮ್ಮ ತನುಮನ
ನಿಮ್ಮ ಜ್ಞಾನ ಭಂಡಾರಕೆ ತಲೆದೂಗಿದರು ಜನ
ಮೆಚ್ಚಿ ಮಾಡಿದರು ನಿಮಗೆ ಬಿರುದು ಬಾವಲಿಗಳೊಂದಿಗೆ ಸನ್ಮಾನ
ಜನಸೇವೆಯೇ ಜನಾರ್ದನ ಸೇವೆಯೆಂದು ನೀವು ತಿಳಿದಿರಪ್ಪ
ಗುರು ಸೇವೆಗೇ ಜೀವನವ ಮುಡಿಪಾಗಿಟ್ಟ ಪತ್ನಿ ಪುಷ್ಪ
ಮೂರು ಸುಂದರ ಪುಷ್ಪಗಳಿಗಾದಿರಿ ನೀವು ಅಪ್ಪ
ಎಂದು ಹೇಳಿದರೆ ಅತಿಶಯೋಕ್ತಿ ಇಲ್ಲಪ್ಪ.
ಈ ಸಂಧರ್ಭದಲಿ ನಮ್ಮೆಲ್ಲರಾ ಅಂತರಂಗದ ಆಶಯವು
ನಿಮ್ಮ ಜೀವನದಿ ಆಗಲಿ ಪ್ರವೃತ್ತಿಯು ಪ್ರಾಧಾನ್ಯವು
ನಿಮಗಾಗಲಿ ಸುಬ್ರಹ್ಮಣ್ಯೇಷ್ವರನ ಕೃಪಾಶೀರ್ವಾದಗಳು
ಆಗಲಿ ನಿಮ್ಮ ಜೀವನವು ಸಾರ್ಥಕವು

(ನನ್ನ ಷಡ್ಕ ಶ್ರೀ ಗುರುದತ್ತರ ನಿವೃತ್ತಿಯ ಸಂದರ್ಭದಲ್ಲಿ ಅವರಿಗೆ ಅರ್ಪಿಸಿದ್ದು)