ಜಗದೊಡೆಯ ವಿಷ್ಣು ಮಾಯಾಲೋಲ
ಅವನದೇ ಮಾಯೆ ಈ ಅಂತರ್ಜಾಲ
ಪಾಪ ರಾಶಿಗೆ ಆಗರವಾಗಿಹ ತಾಣ ನೂರೆಂಟು
ಮೋಕ್ಷ ಮಾರ್ಗಕೂ ತಣಗಳು ಇಲ್ಲುಂಟು
ಕ್ಲಿಕ್ಕಿಸಿದೊಡೆ ವಿಷಯ ತಿಳಿಯುವುದಯ್ಯ
ಕ್ಲಿಕ್ಕಿಸಿದೊಡೆ ಹಾಡು ಕೇಳಿಬರುವುದಯ್ಯ
ಕ್ಲಿಕ್ಕಿಸಿದೊಡೆ ದರುಶನವಾಗುವುದಯ್ಯ
ಕ್ಲಿಕ್ಕಿಸಿದೊಡೆ ಸಂದೇಶ ರವಾನೆಯಾಗುವುದಯ್ಯ
ಓ ಎನ್ನ ಲಕ್ಷ್ಮೀಕೇಶವಯ್ಯ! ನಿನ್ನ
ಅಂತರ್ಜಾಲದ ಮಾಯೆಯೊಳು ಎಲ್ಲ ಸಿಲುಕಿಹರಯ್ಯ!!